Widgets Magazine

ಟಾಲಿವುಡ್ ನಲ್ಲೂ ಸೌಂಡ್ ಮಾಡಲಿದೆ ಕನ್ನಡದ ಪೊರು ಚಿತ್ರದ ಈ ಹಾಡು

ಹೈದರಾಬಾದ್| pavithra| Last Updated: ಮಂಗಳವಾರ, 28 ಜುಲೈ 2020 (13:56 IST)

ಹೈದರಾಬಾದ್ : ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದ ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಹಾಡೊಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ.

ಹೌದು. ಪೊಗರು ಚಿತ್ರದ ಖರಾಬು ಹಾಡು ಇದೀಗ ತೆಲುಗು ವರ್ಷನ್ ಆಗಸ್ಟ್ 6ರಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಸಖತ್ ಹಿಟ್ ಆಗಿದ್ದ ಈ ಹಾಡನ್ನು ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದರು.

ತೆಲಗು ವರ್ಷನ್ ನ ಖರಾಬು ಹಾಡನ್ನು ಅನುರಾಗ್ ಸಿಂಗ್ ಹಾಡಿದ್ದು, ತೆಲುಗಿನಲ್ಲಿ ಈ ಹಾಡು ಯಾವ ರೀತಿ ಮೂಡಿಬರಲಿದೆ ಎಂಬ ಕುತೂಹಲ ಸಿನಿ ಪ್ರಿಯರಲ್ಲಿದೆ.

 
ಇದರಲ್ಲಿ ಇನ್ನಷ್ಟು ಓದಿ :