ಪೊಗರು ಫಸ್ಟ್ ಡೇ ಗಳಿಕೆ ಲೆಕ್ಕ ಕೊಟ್ಟ ಚಿತ್ರತಂಡ

ಬೆಂಗಳೂರು| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:01 IST)
ಬೆಂಗಳೂರು: ಬಹಳ ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ ಸ್ಟಾರ್ ನಟರ ಸಿನಿಮಾ ಎಂದರೆ ಪೊಗರು. ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟೆಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

 
ಮೊದಲ ದಿನವೇ ಚಿತ್ರ 10.5 ಕೋಟಿ ರೂ. ಗಳಿಕೆ ಮಾಡಿರುವುದಾಗಿ ಧ‍್ರುವ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದು ಚಿತ್ರರಂಗದ ಪಾಲಿಗೆ ಶುಭ ಸುದ್ದಿಯೇ ಸರಿ. ಈ ಸಿನಿಮಾದ ಬಗ್ಗೆ ಭಾರೀ ಕ್ರೇಜ್ ಇತ್ತು. ಅದೀಗ ಗಳಿಕೆಯ ಮೂಲಕ ನಿಜವಾಗಿದೆ. ಹೀಗಾಗಿ ಈ ವರ್ಷದ ಮೊದಲ ಹಿಟ್ ಚಿತ್ರವಾಗುವುದಂತೂ ಖಂಡಿತಾ.
ಇದರಲ್ಲಿ ಇನ್ನಷ್ಟು ಓದಿ :