ದರ್ಶನ್ ವಿರುದ್ಧ ಆರೋಪ ಮಾಡಿದ ಇಂದ್ರಜಿತ್ ಲಂಕೇಶ್ ನಿವಾಸಕ್ಕೆ ಬಿಗಿ ಭದ್ರತೆ

ಬೆಂಗಳೂರು| Krishnaveni K| Last Modified ಶುಕ್ರವಾರ, 16 ಜುಲೈ 2021 (11:35 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಹಲ್ಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ‍್ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
 > ದರ್ಶನ್ ಮತ್ತು ಸ್ನೇಹಿತರು ಮೈಸೂರಿನ ಸಂದೇಶ್ ನಾಗರಾಜ್ ಒಡೆತನದ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನೌಕರನಿಗೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ನಿನ್ನೆ ಆರೋಪ ಮಾಡಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.>   ಈ ಹಿನ್ನಲೆಯಲ್ಲಿ ಕೋರಮಂಗಲದಲ್ಲಿರುವ ಇಂದ್ರಜಿತ್ ನಿವಾಸದ ಮುಂದೆ ಗಲಾಟೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆ ಒದಗಿಸಿದ್ದಾರೆ. ಇಂದು ಕೂಡಾ ಇಂದ್ರಜಿತ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :