ಹೈದರಾಬಾದ್ : ವೆಂಕಟೇಶ್ ಅಭಿನಯದ ಮತ್ತು ಶ್ರೀಕಾಂತ್ ಅಡಾಲಾ ನಿರ್ದೇಶನದ ‘ನಾರಪ್ಪ’ ಚಿತ್ರ ಬಿಡುಗಡೆಯ ದಿನವನ್ನು ಮುಂದೂಡಲಾಗಿದೆ. ನಾರಪ್ಪ ಚಿತ್ರ ಮೇ 14ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಕೊರೊನಾ 2ನೇ ಅಲೆಯ ಕಾರಣದಿಂದ ಚಿತ್ರವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಿಕ್ಕಟ್ಟು ನಿವಾರಣೆಯಾದ ಬಳಿಕ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ವೆಂಕಟೇಶ್ ತಿಳಿಸಿದ್ದಾರೆ.ಹಾಗೇ ನಾರಪ್ಪ ಚಿತ್ರ ಅಸುರನ್ ಚಿತ್ರದ ರಿಮೇಕ್ ಆಗಿದ್ದು, ಸಾಕಷ್ಟು ಪರಿಶ್ರಮದಿಂದ ಮಾಡಲಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.