ಮುಂಬೈನಲ್ಲಿ ಪವರ್ ಕಟ್ : ಬಾಲಿವುಡ್ ನಟನ ಟ್ವಿಟ್ ವೈರಲ್

ಮುಂಬೈ| Jagadeesh| Last Modified ಸೋಮವಾರ, 12 ಅಕ್ಟೋಬರ್ 2020 (19:19 IST)
ಮುಂಬೈನಲ್ಲಿನ ವಿದ್ಯುತ್ ವೈಫಲ್ಯದ ಬಗ್ಗೆ ಬಾಲಿವುಡ್ ನಟ ಟ್ವಿಟ್ ಮಾಡಿದ್ದು ವೈರಲ್ ಆಗಿದೆ.
ನಟ ಸೋನು ಸೂದ್ ಪ್ರಮುಖ ಸಂದೇಶವನ್ನು ಹಂಚಿಕೊಂಡಿದ್ದಾರೆ.> > ಮುಂಬೈ ನಗರವು ಹಠಾತ್ ವಿದ್ಯುತ್ ಕಡಿತವನ್ನು ಅನುಭವಿಸುತ್ತಿದ್ದಂತೆ ಬೆಳಿಗ್ಗೆ ಮುಂಬೈ ಸ್ಥಗಿತಗೊಂಡಿತು. ಹಲವಾರು ಬಾಲಿವುಡ್ ಖ್ಯಾತನಾಮರಾದ ಅಮಿತಾಬ್ ಬಚ್ಚನ್, ನಿಮ್ರತ್ ಕೌರ್, ಅಲಿ ಫಜಲ್ ಮತ್ತು ಇತರರು ಸೋಷಿಯಲ್ ಮೀಡಿಯಾದಲ್ಲಿ ಜನರು ಶಾಂತವಾಗಿರಲು ಮನವಿ ಮಾಡಿದರು.
ಮುಂಬೈಯಲ್ಲಿ ಎರಡು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಂಡಾಗ ಇಡೀ ದೇಶಕ್ಕೆ ಹೇಗೆ ತಿಳಿಯಿತು ಎಂದು ಸೋನು ತಮ್ಮ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದು, ಆದರೆ ಇಂದಿಗೂ ದೇಶದಲ್ಲಿ ಎರಡು ಗಂಟೆಗಳ ಕಾಲ ವಿದ್ಯುತ್ ಸಿಗದ ಅನೇಕ ಮನೆಗಳಿವೆ. ಆದ್ದರಿಂದ ದಯವಿಟ್ಟು ತಾಳ್ಮೆಯಿಂದಿರಿ ಎಂದು ಟ್ವಿಟ್ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :