ಬೆಂಗಳೂರು: ಹರಿವು, ನಾತಿಚರಾಮಿ ಸಿನಿಮಾ ಮೂಲಕ ಚಂದನವನದಲ್ಲಿ ಸಂಚಲನ ಸೃಷ್ಟಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೂರೆ ‘ಆಕ್ಟ್ 1978’ ಚಿತ್ರದ ಮೂಲಕಪ್ರೇಕ್ಷಕರಎದುರು ಬರುತ್ತಿದ್ದಾರೆ. ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲವನ್ನುಹುಟ್ಟುಹಾಕಿರುವ ಚಿತ್ರ ಟ್ರೈಲರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಆಕ್ಟ್ 1978’ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಪಿಆರ್ಕೆ ಆಡಿಯೋನಲ್ಲಿ ‘ಆಕ್ಟ್1978’ ಚಿತ್ರದ