ಬೆಂಗಳೂರು: ಬಣ್ಣದ ಲೋಕ ಸಾಮಾನ್ಯ ಜನರಿಗಿಂತ ನಟ ನಟಿಯರನ್ನೇ ಹೆಚ್ಚು ಹಾದಿ ತಪ್ಪಿಸುತ್ತಿದೆ ಎನ್ನುವುದಕ್ಕೆ ಈಗ ನಡೆಯುತ್ತಿರುವ ಡ್ರಗ್ ಮಾಫಿಯಾವೂ ಸಾಕ್ಷಿ.ಪಾರ್ಟಿ ಸಂಸ್ಕೃತಿಯೇ ಇಂತಹ ಅನೈತಿಕ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿದೆ. ಜತೆಗೆ ದುಬಾರಿ ಲೈಫ್ ಸ್ಟೈಲ್ ನ ಕನಸು ಅಡ್ಡದಾರಿ ಹಿಡಿಸುತ್ತಿದೆ. ಸುಲಭವಾಗಿ ಹಣ ಮಾಡುವ, ಯಾವುದೇ ಮಾರ್ಗಕ್ಕೂ ಹೇಸದ ಮಧ್ಯವರ್ತಿಗಳು ಇದನ್ನೇ ಹಣ ಗಳಿಸುವ ಕಸುಬಾಗಿ ಮಾಡುತ್ತಿದ್ದಾರೆ. ಇಂತಹವರಿಗೆ ಸುಲಭವಾಗಿ ಆಹಾರವಾಗುತ್ತಿರುವುದು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗದ, ಆದರೆ ಪ್ರತಿಭಾವಂತ