ಬೆಂಗಳೂರು: ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಮೊದಲ ಶೋ ನೋಡಿದ ಪ್ರೇಕ್ಷಕರು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ.ಭರ್ಜರಿ ಫೈಟ್, ಆಕ್ಷನ್, ಥ್ರಿಲ್ಲಿಂಗ್ ಸೀನ್ ಎಲ್ಲವೂ ಸೂಪರ್. ಪ್ರಭಾಸ್ ಎಂಟ್ರಿ ಅದ್ಭುತ. ಶ್ರದ್ಧಾ ಕಪೂರ್ ಜತೆಗಿನ ರೊಮ್ಯಾಂಟಿಕ್ ಹಾಡುಗಳು ಕಣ್ಣಿಗೆ ಹಬ್ಬ. ಇದೆಲ್ಲವೂ ಇಷ್ಟು ದಿನ ಕಾದಿದ್ದಕ್ಕೂ ಪ್ರಭಾಸ್ ಅಭಿಮಾನಿಗಳ ಭರ್ಜರಿ ರಸದೌತಣ ಎಂದು ಟ್ವಿಟರಿಗರು ಕಾಮೆಂಟ್ ಮಾಡಿದ್ದಾರೆ.ಆದರೆ ಹೇಳಿಕೊಳ್ಳುವಂತಹ ಕತೆ ಇಲ್ಲ.