ಹೈದರಾಬಾದ್: ಬಾಹುಬಲಿ ಜೋಡಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪರಸ್ಪರ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದರೂ ಅವರ ಅಭಿಮಾನಿಗಳು ಇಬ್ಬರೂ ಮದುವೆಯಾಗಲಿ ಎಂದೇ ಬಯಸುತ್ತಾರೆ.ಈಗ ಈ ಜೋಡಿ ಜಪಾನ್ ಗೆ ಜತೆಯಾಗಿ ತೆರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ ಅನುಷ್ಕಾ ಮತ್ತು ಪ್ರಭಾಸ್ ಈಗ ಜಪಾನ್ ಗೆ ಹೋಗಿರುವುದು ಸಿನಿಮಾ ವಿಚಾರಕ್ಕೆ.ಪ್ರಭಾಸ್ ಅಭಿನಯದ ಮಿರ್ಚಿ ಮತ್ತು ಡಾರ್ಲಿಂಗ್ ಸಿನಿಮಾ ಜಪಾನ್ ನಲ್ಲಿ ಮಾರ್ಚ್ 2 ರಂದು ತೆರೆ ಕಾಣುತ್ತಿದೆ.