ಮದುವೆ ಸಂಭ್ರಮದಲ್ಲಿ ಪ್ರಭಾಸ್-ಅನುಷ್ಕಾ ಜೋಡಿ!

ಬೆಂಗಳೂರು, ಭಾನುವಾರ, 30 ಡಿಸೆಂಬರ್ 2018 (06:12 IST)

ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್-ಅನುಷ್ಕಾ ಜೋಡಿ ರಿಯಲ್ ಲೈಫ್ ನಲ್ಲೂ ಜೋಡಿಯಾಗುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇವರಿಬ್ಬರು ಮಾತ್ರ ಈ ವಿಚಾರದಲ್ಲಿ ಏನನ್ನೂ ಹೇಳುತ್ತಿಲ್ಲ.


 
ಆದರೆ ಇದೀಗ ಇಬ್ಬರೂ ಮದುವೆ ಮನೆಗೆ ಬಂದಿದ್ದಾರೆ. ಅವರ ಜತೆಗೆ ಬಾಹುಬಲಿ ವಿಲನ್ ರಾಣಾ ದಗ್ಗುಬಟಿ ಕೂಡಾ ಇದ್ದಾರೆ. ಇವರು ಮೂವರೂ ಬಂದಿರುವುದು ಬಾಹುಬಲಿ ನಿರ್ದೇಶಕ ರಾಜಮೌಳಿ ಪುತ್ರನ ಮದುವೆಗೆ!
 
ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಭಾಸ್, ಅನುಷ್ಕಾ, ರಾಣಾ ಸೇರಿದಂತೆ ರಾಜಮೌಳಿ ಆಪ್ತರ ದಂಡೇ ಹರಿದುಬಂದಿದೆ.
 
ಅಂದ ಹಾಗೆ ಕಾರ್ತಿಕೇಯ ವಿವಾಹವಾಗುತ್ತಿರುವುದು ತೆಲುಗು ನಟ ಜಗಪತಿ ಬಾಬು ಸೊಸೆ ಪೂಜಾ ಪ್ರಸಾದ್ ರನ್ನು. ಇಂದು ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಿನ್ನೆಯಿಂದಲೇ ಕಾರ್ಯಕ್ರಮಗಳು ಆರಂಭವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಮುಂಗಾರು ಮಳೆ’ ನೆನಪಿನಲ್ಲಿ ನೆನೆದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಇಂದು ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾವನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದೆ. ಆದರೆ ಇದೇ 12 ...

news

ಅಬ್ಬಾ..! ಕೆಜಿಎಫ್ ನೋಡಲು ನಟಿ ಅಮೂಲ್ಯ ಖರೀದಿಸಿದ ಟಿಕೆಟ್ ಗಳೆಷ್ಟು ಗೊತ್ತಾ?!

ಬೆಂಗಳೂರು: ಕೆಜಿಎಫ್ ಸಿನಿಮಾ ಈಗ ಎಲ್ಲೆಡೆ ಹವಾ ಎಬ್ಬಿಸುತ್ತಿದೆ. ಚಿತ್ರಮಂದಿರಗಳೂ ಭರ್ತಿಯಾಗಿವೆ. ಈ ನಡುವೆ ...

news

ಅಕ್ಕ ಜಾಹ್ನವಿಗೇ ಕಾಂಪಿಟೀಷನ್ ಕೊಡಲು ಹೊರಟ ಶ್ರೀದೇವಿ ಇನ್ನೊಬ್ಬ ಪುತ್ರಿ ಖುಷಿ

ಮುಂಬೈ: ಶ್ರೀದೇವಿ ಬದುಕಿದ್ದಾಗಲೇ ಬಣ್ಣದ ಬದುಕು ಪ್ರವೇಶಿಸಿದ್ದ ಜಾಹ್ನವಿ ಈಗ ಬಾಲಿವುಡ್ ನ ಉದಯೋನ್ಮುಖ ...

news

ಎರಡನೇ ವಾರವೂ ಕೆಜಿಎಫ್ ಸಕ್ಸಸ್: ಹಿಂದಿ, ಅಮೆರಿಕಾದಲ್ಲಿ ಗಳಿಕೆ ಮಾಡಿದ್ದೆಷ್ಟು?

ಬೆಂಗಳೂರು: ಕೆಜಿಎಫ್ ಯಶಸ್ವೀ ಓಟ ಇನ್ನೂ ಮುಂದುವರಿದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಈಗಾಗಲೇ ...