ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಮದುವೆ ಬಗ್ಗೆ ಮತ್ತೆ ರೂಮರ್ ಹಬ್ಬಿದೆ. ಪ್ರಭಾಸ್ ಉದ್ಯಮಿ ಪುತ್ರಿಯೊಬ್ಬರ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಬಂದಿದೆ.ಅಮೆರಿಕಾ ಮೂಲದ ಉದ್ಯಮಿಯೊಬ್ಬರ ಪುತ್ರಿಯ ಜತೆ ವಿವಾಹವಾಗಲಿದ್ದಾರೆ. ಸಾಹೋ ಸಿನಿಮಾ ಬಿಡುಗಡೆ ನಂತರ ಈ ಬಗ್ಗೆ ಅನೌನ್ಸ್ ಮಾಡಬಹುದು ಎಂಬ ಸುದ್ದಿ ಓಡಾಡುತ್ತಿದೆ.ಆದರೆ ಇದು ನಿಜವಲ್ಲ ಎಂದು ಪ್ರಭಾಸ್ ಆಪ್ತ ಮೂಲಗಳು ಹೇಳುತ್ತಿವೆ. ಪ್ರಭಾಸ್ ಗೆ ಸದ್ಯಕ್ಕೆ ವಿವಾಹವಾಗುವ ಯೋಜನೆಯಿಲ್ಲ ಎಂದು ಅವರ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.