ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಕಳೆದ ನಾಲ್ಕೈದು ವರ್ಷಗಳಲ್ಲಿ ಸಿನಿಮಾಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡಿದ್ದಾರೆ.ಬಾಹುಬಲಿ ಸಿನಿಮಾ ಶೂಟಿಂಗ್ ನಲ್ಲಿ 2-3 ವರ್ಷ ತೊಡಗಿಸಿಕೊಂಡಿದ್ದ ಪ್ರಭಾಸ್ ಬಳಿಕ ರಾಧೆ ಶ್ಯಾಮ್, ಸಾಹೋ, ಆದಿಪುರುಷ್ ಎಂಬ ಮೂರು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ, ಸಲಾರ್, ಪ್ರಾಜೆಕ್ಟ್ ಕೆ ಶೂಟಿಂಗ್ ಹಂತದಲ್ಲಿದೆ. ಇದಾದ ಬಳಿಕ ಸಲಾರ್ 2 ಮಾಡಲಿದ್ದಾರೆ. ಸತತ ಕೆಲಸಗಳ ನಡುವೆ ಅವರ ಆರೋಗ್ಯ ಪದೇ ಪದೇ ಕೈಕೊಡುತ್ತಿದೆ. ಮೊಣಕಾಲಿನ