ಹೈದರಾಬಾದ್: ಬಾಹುಬಲಿ ಸಿನಿಮಾ ಬಳಿಕ ರೆಬಲ್ ಸ್ಟಾರ್ ಪ್ರಭಾಸ್ ಮದುವೆಯಾಗಲು ಯೋಚಿಸಿದ್ದರಂತೆ. ಆದರೆ ಆ ಒಂದು ವಿಚಾರದಿಂದಾಗಿ ಮದುವೆ ಈಗ ಬೇಡ ಎಂದು ನಿರ್ಧರಿಸಿದರಂತೆ! ಹೀಗಂತ ರಾಧೇ ಶ್ಯಾಮ್ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಪ್ರಭಾಸ್ ಬಹಿರಂಗಪಡಿಸಿದ್ದಾರೆ.ಎಲ್ಲರ ಮನೆಯಲ್ಲಿರುವಂತೆ ನನ್ನ ಮನೆಯಲ್ಲೂ ಅಮ್ಮ ಮದುವೆಯಾಗು ಎಂದು ಹೇಳುತ್ತಲೇ ಇರುತ್ತಾರೆ. ಆವತ್ತು ಬಾಹುಬಲಿ ಸಿನಿಮಾ ಒಂದು ಮುಗಿಯಲಿ. ಆಮೇಲೆ ಮದುವೆಯಾಗುತ್ತೇನೆ ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಆ ಸಂದರ್ಭದಲ್ಲಿ ಪ್ರೀತಿ ನಾನು ಊಹೆ ಮಾಡಿದ