ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಭರ್ಜರಿ ಹಿಟ್ ಆಗಿದ್ದು, ನಾಳೆಯಿಂದ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.ಈ ಸಿನಿಮಾದ ಕನ್ನಡ ಅವತರಣಿಕೆಯನ್ನು ತೆಲುಗು ಸ್ಟಾರ್ ನಟ ಪ್ರಭಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪ್ರಭಾಸ್ ತೆಲುಗು ವರ್ಷನ್ ವೀಕ್ಷಿಸಿದ್ದಾರೆ.ತೆಲುಗಿಗೆ ಡಬ್ ಆಗಿರುವ ಅವತರಣಿಕೆಯನ್ನು ಪ್ರಸಾದ್ ಲ್ಯಾಬ್ಸ್ ನಲ್ಲಿ ಪ್ರಭಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.-Edited by Rajesh Patil