ಲವ್, ಕಾಮಿಡಿ ಹಾಗೂ ಥ್ರಿಲ್ಲರ್ ಸಸ್ಪೆನ್ಸ್ ಕಥಾನಕ ಹೊಂದಿದ ಚಲನಚಿತ್ರ ಡಮ್ಕಿ ಡಮಾರ್ ಹೊಸ ವರ್ಷದ ಆರಂಭದಲ್ಲಿ ಚಿತ್ರ ಮಂದಿರಗಳಿಗೆ ಲಗ್ಗೆ ಇಡಲು ಸಿದ್ದವಾಗಿದೆ. ಜಗ್ಗೇಶ್ ಅಭಿನಯದ ವೀರಣ್ಣ, ಮನೆಮನೆ ರಾಮಾಯಣ, ಸಿಂಧು, ಬೆಳದಿಂಗಳ ರಾತ್ರಿ ಮೊದಲಾದ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಸದ್ಗುಣ ಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ, ಶ್ರೀಧರ್ ಪಿ ಸಂಭ್ರಮ್, ಮನೋಮೂರ್ತಿ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರ