ಬೆಂಗಳೂರು: ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಬಹುಭಾಷಾ ತಾರೆ ಪ್ರಕಾಶ್ ರೈ ಕೆಂಡಾಮಂಡಲರಾಗಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತು ಸ್ಪಷ್ಟನೆಯನ್ನೂ ಪ್ರಕಟಿಸಿದ್ದಾರೆ. ನಟರು ರಾಜಕೀಯ ಪ್ರವೇಶಿಸುವ ಕುರಿತು ಪ್ರಕಾಶ್ ರೈ ಮಾಧ್ಯಮ ಸಂವಾದದಲ್ಲಿ ಜನಪ್ರಿಯ ನಟರು ತಮ್ಮ ಜನಪ್ರಿಯತೆಯ ಆಧಾರದಲ್ಲಿ ರಾಜಕೀಯ ಪ್ರವೇಶಿಸುವುದು ತಪ್ಪು ಎಂದಿದ್ದರು. ಆದರೆ ಇದನ್ನು ಮಾಧ್ಯಮಗಳು ನಟರು ರಾಜಕೀಯ ಪ್ರವೇಶಿಸಬಾರದು ಎಂದು ಪ್ರಕಾಶ್ ರೈ ಹೇಳಿದ್ದಾರೆಂದು ವರದಿ