ಹೈದರಾಬಾದ್: ತೆಲುಗು ಕಲಾವಿದರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಕನ್ನಡ ಮೂಲದ ನಟ ಪ್ರಕಾಶ್ ರಾಜ್ ಸೋತು ಮುಖಭಂಗ ಅನುಭವಿಸಿದ್ದಾರೆ.ವಿಷ್ಣು ಮಂಚು ಎದುರು ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಗೆ ಸೋಲಾಗಿದೆ. ವಿಷ್ಣು ಬಳಗ 10 ಸ್ಥಾನ ಗೆದ್ದರೆ, ಪ್ರಕಾಶ್ ರಾಜ್ 8 ಸ್ಥಾನ ಗೆದ್ದಿದ್ದಾರೆ. ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಪ್ರಕಾಶ್ ರಾಜ್ ಮೂಲ ತೆಲುಗು ಕಲಾವಿದನಲ್ಲ ಎನ್ನುವ ಕಾರಣಕ್ಕೆ ಅವರ ಸ್ಪರ್ಧೆಗೆ ವಿರೋಧವೂ