ಮತ್ತೊಂದು ಮದುವೆಯಾದ್ರು ನಟ ಪ್ರಕಾಶ್ ರಾಜ್!

ಚೆನ್ನೈ| Krishnaveni K| Last Modified ಬುಧವಾರ, 25 ಆಗಸ್ಟ್ 2021 (10:36 IST)
ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ಈಗ ಮತ್ತೆ ಮದುವೆಯಾಗಿದ್ದಾರಂತೆ! ಈ ವಿಚಾರವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ!
 > ಸದ್ಯಕ್ಕೆ ಪೊನ್ನಿಯನ್ ಸೆಲ್ವನ್ ಚಿತ್ರೀಕರಣಕ್ಕಾಗಿ ಮಧ‍್ಯಪ್ರದೇಶದಲ್ಲಿರುವ ಪ್ರಕಾಶ್ ರಾಜ್ ತಮ್ಮ ಮಕ್ಕಳ ಎದುರೇ ಮರು ಮದುವೆಯಾಗಿದ್ದಾರೆ. ಆದರೆ ಹುಡುಗಿ ಬೇರೆಯವರಲ್ಲ. ತಮ್ಮ ಪತ್ನಿ ಪೋನಿ ವರ್ಮಾರನ್ನೇ ಮತ್ತೆ ಮದುವೆಯಾಗಿದ್ದಾರೆ.>   ಪ್ರಕಾಸ್ ಮತ್ತು ಪೋನಿ ನಿನ್ನೆ 11 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ ಪುತ್ರ ವೇದಾಂತ್ ಗೆ ತನ್ನ ಅಪ್ಪ-ಅಮ್ಮನ ಮದುವೆ ನೋಡಬೇಕೆಂದು ಆಸೆಯಾಗಿದೆ. ಅವನ ಆಸೆ ನೆರವೇರಿಸಲು ಪ್ರಕಾಶ್-ಪೋನಿ ದಂಪತಿ ಪರಸ್ಪರ ರಿಂಗ್ ಎಕ್ಸ್ ಚೇಂಜ್ ಮಾಡಿ ಕಿಸ್ ಮಾಡಿ ಔಪಚಾರಿಕವಾಗಿ ಮದುವೆಯಾಗಿದ್ದಾರೆ. ಇದಕ್ಕೆ ಪ್ರಕಾಶ್ ಮೊದಲನೇ ಪತ್ನಿ ಮಕ್ಕಳಾದ ಮೇಘನಾ, ಪೂಜಾ ಕೂಡಾ ಸಾಕ್ಷಿಯಾಗಿದ್ದರು.ಇದರಲ್ಲಿ ಇನ್ನಷ್ಟು ಓದಿ :