ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಅಭಿನಯಿಸಿದ್ದ ಸಾಹೋ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿಸಿದ ಯಶಸ್ಸು ಕಂಡಿರಲಿಲ್ಲ. ಆದರೆ ಪ್ರಭಾಸ್ ಬಗೆಗಿನ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.ಈಗ ಪ್ರಭಾಸ್ 22 ನೇ ಸಿನಿಮಾಗೆ ತಯಾರಿ ನಡೆಯುತ್ತಿದ್ದು, ನಿರ್ದೇಶಕರು ಯಾರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಭಾಸ್ ಸಿನಿಮಾಗೆ ನಿರ್ದೇಶನ ಮಾಡಲಿರುವ ನಿರ್ದೇಶಕರ ಪಟ್ಟಿಯಲ್ಲಿ ಘಟಾನುಘಟಿಗಳ ಹೆಸರೇ ಕೇಳಿಬರುತ್ತಿದೆ.ಕೆಲವರು ಬಾಲಿವುಡ್ ನ ಸಂಜಯ್ ಲೀಲಾ ಬನ್ಸಾಲಿ ಎನ್ನುತ್ತಿದ್ದಾರೆ. ಆದರೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಕನ್ನಡಿಗ