ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ, ನಟ ಪ್ರಥಮ್ ಬಹುಭಾಷಾ ತಾರೆ ಪ್ರಕಾಶ್ ರೈ ಸೋ ಕಾಲ್ಡ್ ನಟ ಎಂದು ಲಘುವಾಗಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ನಂತರ ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಕಿಡಿ ಕಾರುತ್ತಿರುವ ಪ್ರಕಾಶ್ ರೈ ಮೇಲೆ ಪ್ರಥಮ್ ಕಿಡಿ ಕಾರಿದ್ದರು. ಕರ್ನಾಟಕದಲ್ಲಿ ಬದುಕುವುದಕ್ಕೆ ಭಯದ ವಾತಾವರಣವಿದೆ ಎಂದು ಹೇಳಿ ಕನ್ನಡಿಗರಿಗೆ ಅವಮಾನ ಮಾಡಬೇಡಿ. ಅಷ್ಟೊಂದು ಭಯ