ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವ ಸುದ್ದಿ ಆಗಾಗ ಕೇಳಿಬರುತ್ತಿದ್ದು, ಅದೇ ಸಾಲಿಗೆ ಈಗ ಒಳ್ಳೆ ಹುಡುಗ ಪ್ರಥಮ್ ಕೂಡ ಸೇರಿದ್ದಾರೆ. ಇವರು ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಆ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಶಾಸಕನಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾನೂರನ್ನು ತಾಲೂಕಾಗಿ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿದ ಪ್ರಥಮ್ ಅವರು ಹಾನೂರು ತಾಲೂಕಿಗೆ ನಾನು ಶಾಸಕನಾಗಬೇಕೆಂಬ ಆಸೆ