ಮಂಗಳೂರು : ಸಚಿವ ಯು.ಟಿ.ಖಾದರ್ ಅವರು ತಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ತನ್ನನ್ನು ಅನುಮಾನದಿಂದ ನೋಡಲಾಗುತ್ತಿದೆ ಎಂದು ಹೇಳಿದಕ್ಕೆ ಒಳ್ಳೆ ಹುಡುಗ ಪ್ರಥಮ್ ಅವರು ಫೇಸ್ ಬುಕ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಪ್ರಥಮ್ ಅವರು, ನಿಮಗೆ ಅಷ್ಟೊಂದು ಅವಮಾನ, ಅನುಮಾನ ಆಗುತ್ತಿದ್ದರೆ ಬೇರೆ ಧರ್ಮಕ್ಕೆ ಮತಾಂತರವಾಗಿಬಿಡಿ , ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿಬಿಡಿ. ಯಾಕೆ ಕಷ್ಟ ಪಟ್ಟು ಮುಸ್ಲಿಂ ಆಗಿರುತ್ತೀರಾ. ಭಾರತದಲ್ಲಿ ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಬಹುದು.