ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ದಿ ವಿಲನ್ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ಪ್ರೇಮ್ ಇದೀಗ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳ ಹಾಗೂ ಪರಭಾಷೆಯ ಸಿನಿಮಾಗಳ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಚಿತ್ರಗಳಿಗೆ ಶೇ. 50ರಷ್ಟು ಪರ್ಸೆಂಟೇಜ್ ಹಣ ಕೊಟ್ಟರೆ, ಪರ ಭಾಷಾ ಸಿನಿಮಾಗಳಿಗೆ ಮಾತ್ರ ಶೇ. 55ರಷ್ಟು ಪರ್ಸೆಂಟೇಜ್ ಕೊಡ್ತಾರೆ. ಈಗ ದಿ ವಿಲನ್ ಚಿತ್ರಕ್ಕೂ ಶೇ. 50 ರಷ್ಟು ಮಾತ್ರ