ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲೂ ಈಗ ಕೊರೋನಾ ತಲ್ಲಣ ಶುರುವಾಗಿದೆ. ಈಗಾಗಲೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಐಶ್ವರ್ಯಾ ಸರ್ಜಾ, ಹುಲಿವಾನ್ ಗಂಗಾಧರ್ ಸೇರಿದಂತೆ ಕೆಲವರಿಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ಬಂದಿದೆ. ಇದೀಗ ಸ್ಯಾಂಡಲ್ ವುಡ್ ಹೀರೋ ನೆನಪಿರಲಿ ಖ್ಯಾತಿಯ ಪ್ರೇಮ್ ತಾಯಿಗೂ ಕೊರೋನಾ ಸೋಂಕು ತಗುಲಿತ್ತು ಎಂದು ತಿಳಿದುಬಂದಿದೆ.ಪ್ರೇಮ್ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮನೆಯ ಉಳಿದ ಸದಸ್ಯರಿಗೆ ಯಾರಿಗೂ