Widgets Magazine

ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

love
ಬೆಂಗಳೂರು| Rajesh patil| Last Updated: ಶನಿವಾರ, 15 ಫೆಬ್ರವರಿ 2020 (12:53 IST)
ಚಿತ್ರದ ಮೂಲಕ ಸ್ಯಾಂಡಲ್ ವುಡ್‌ ನಲ್ಲಿ ಗಮನ ಸೆಳೆದ ನಿರ್ದೇಶಕ ಅಭಿರಾಮ್ ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬಂದಿದ್ದಾರೆ. ಈ ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಿದೆ.
ಸಂಯುಕ್ತ-2 ಚಿತ್ರಕ್ಕೆ ಬಂಡವಾಳ ಹೂಡಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಸಂಭ್ರಮಶ್ರೀ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಕಾಮಿಡಿ ಎಂಟಟೈನ್ಮೆಂಟ್ ಕಂ ಥ್ರಿಲ್ಲರ್ ಸಬ್ಜೆಕ್ಟ್ ಇರೋ ಕಥೆ ಪ್ರೆಸೆಂಟ್  ಪ್ರಪಂಚ 0% ಲವ್ ಚಿತ್ರದಲ್ಲಿದೆ. ಪ್ರಸ್ತುತ ದಿನಗಳಲ್ಲಿ ಜನರ ಜೀವನ ಹೇಗಾಗಿದೆ. ಏನನ್ನು ಕಳೆದುಕೊಂಡಿದ್ದಾರೆ,ಜೀವನದಲ್ಲಿ ಏನಿರಬೇಕಿತ್ತು, ಏನಿರಬಾರದು ಎಂಬ ಸೂಕ್ಷ್ಮ ಎಳೆ ಚಿತ್ರದಲ್ಲಿದೆ.
love
ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರಕ್ಕೆ ಕೃಷ್ಣಮೂರ್ತಿ ಎಲ್. ರವಿಕುಮಾರ್ ಹೆಚ್ ಪಿ  ಬಂಡವಾಳ ಹೂಡಿದ್ದು, ರವಿತೇಜಸ್ವಿ ಮ್ಯೂಸಿಕ್ ಚಿತ್ರಕ್ಕಿದೆ. ತಬಲ‌ನಾಣಿ, ಯಶಸ್ ಅಭಿ, ಚಂದನ್ ಆಚಾರ್, ಗೋವಿಂದೇ ಗೌಡ ಸೇರಿದಂತೆ ಹಲವು‌ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
love

ಸದ್ಯ ಚಿತ್ರದ ಪೋಸ್ಟರ್ ಮೂಲಕ ಟಾಕ್ ಕ್ರಿಯೇಟ್ ಮಾಡಿರೋ ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರ ಸದ್ಯದಲ್ಲೆ ಚಿತ್ರದ ಇನ್ನಷ್ಟು ಸ್ಯಾಂಪಲ್ ಗಳನ್ನ ಅಪ್ಡೇಟ್‌ ಮಾಡಲಿದೆ.



ಇದರಲ್ಲಿ ಇನ್ನಷ್ಟು ಓದಿ :