ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್ಗಳನ್ನು ಹಿಂದಿಕ್ಕಿ ದೇಶಾದ್ಯಂತ ಯುವಕರ ನಿದ್ದೆ ಗೆಡಿಸಿ ಏಕಾಏಕಿ ಸ್ಟಾರ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಅಂತ ಪರಿಚಯಿಸಿಕೊಂಡಿರುವ ಈಕೆ ಬೇರೆಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸದ್ಯ ಕಣ್ಸನ್ನೆ ಹುಡುಗಿ ಪ್ರಿಯಾಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಿಂದ ಸಿನಿಮಾ ಆಫರ್ಗಳು ಬರುತ್ತಿವೆ. ಆದರೆ ಪ್ರಿಯಾ ವಾರಿಯರ್ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆಂಬುವ ಸುದ್ದಿ ಕೇಳಿಬರುತ್ತಿದೆ. ಕನ್ನಡದ ಯುವ ನಿರ್ದೇಶಕ,