ರಿಯಲ್ ಸ್ಟಾರ್ ಉಪೇಂದ್ರ ಫ್ಯಾಮಿಲಿ ಪಾರ್ಟಿಯಲ್ಲಿ ತಾರೆಯರ ದಂಡು

ಬೆಂಗಳೂರು| Krishnaveni K| Last Modified ಸೋಮವಾರ, 18 ನವೆಂಬರ್ 2019 (10:35 IST)
ಬೆಂಗಳೂರು: ರಿಯಲ್ ಸ್ಟಾರ್ ತಮ್ಮ ಪತ್ನಿ ಪ್ರಿಯಾಂಕ ಜನ್ಮದಿನದ ಸಂಭ್ರಮಾಚರಿಸಲು ಕರೆದಿದ್ದ ಫ್ಯಾಮಿಲಿ ಪಾರ್ಟಿಗೆ ಸ್ಯಾಂಡಲ್ ವುಡ್‍ ತಾರೆಯರ ದಂಡೇ ಹರಿದುಬಂದಿದೆ.
 

ಬರ್ತ್ ಡೇ ಅಂಗವಾಗಿ ಪಂಚತಾರಾ ಹೋಟೆಲ್ ನಲ್ಲಿ ಭರ್ಜರಿಯಾಗಿ ಉಪ್ಪಿ ಪಾರ್ಟಿ ಅರೇಂಜ್ ಮಾಡಿದ್ದರು. ಈ ಸಂದರ್ಭದಲ್ಲಿ ಉಪೇಂದ್ರ ಕುಟುಂಬವರ್ಗವೇ ಅಲ್ಲಿ ಹಾಜರಿತ್ತು.
 
ಇನ್ನು, ಕೇಕ್ ಕಟ್ ಮಾಡುವ ಸಂಭ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್, ನಟಿ ಅಮೂಲ್ಯ, ರಾಗಿಣಿ ದ್ವಿವೇದಿ, ಜಯರಾಮ್ ಕಾರ್ತಿಕ್, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ಕರ್, ಕವಿತಾ ಲಂಕೇಶ್ ಸೇರಿದಂತೆ ಉಪ್ಪಿ ಆಪ್ತರೆಲ್ಲರೂ ಸಾಕ್ಷಿಯಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :