ಬೆಂಗಳೂರು: ಪ್ರಿಯಾಂಕ ಉಪೇಂದ್ರ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ತಮ್ಮ ಪಾತ್ರಗಳ ವಿಚಾರದಲ್ಲಿ ಪ್ರಿಯಾಂಕ ಚ್ಯೂಸಿಯಾಗಿರುತ್ತಾರೆ.ಇದೀಗ ಪ್ರಿಯಾಂಕಾ ಪೊಲೀಸ್ ಅವತಾರದಲ್ಲಿ ವೀಕ್ಷಕರ ಮುಂದೆ ಬರಲಿದ್ದಾರೆ. ಗುರುಮೂರ್ತಿ ನಿರ್ದೇಶನದ ಉಗ್ರಾವತಾರ ಸಿನಿಮಾದಲ್ಲಿ ಪ್ರಿಯಾಂಕ ತನಿಖಾಧಿಕಾರಿಯ ಪಾತ್ರ ಮಾಡಲಿದ್ದಾರೆ.ಈ ಸಿನಿಮಾದಲ್ಲಿ ಪ್ರಿಯಾಂಕ ಸಾಹಸ ದೃಶ್ಯಗಳಲ್ಲಿ ಅಭಿನಯಿಸಲಿದ್ದಾರಂತೆ. ಅದಕ್ಕಾಗಿ ಫೈಟಿಂಗ್ ಕಲಿಯುತ್ತಿದ್ದಾರಂತೆ. ಇದೇ ಮೊದಲ ಬಾರಿಗೆ ಪ್ರಿಯಾಂಕ ಇಂತಹ ಪಾತ್ರ ಮಾಡುತ್ತಿದ್ದು, ಅದಕ್ಕಾಗಿ ಫುಲ್ ತಯಾರಿ ನಡೆಸುತ್ತಿದ್ದಾರೆ.