ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ದೇವಕಿ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಈಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಉಪೇಂದ್ರ ಪತ್ನಿಗೆ ಕಿರುತೆರೆಯಲ್ಲಿ ಏನು ಕೆಲಸ ಅಂತೀರಾ? ಪ್ರಿಯಾಂಕಾ ಕಿರುತೆರೆಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧಾರವಾಹಿಯೊಂದರ ಪ್ರಮೋಷನ್ ಕೆಲಸಕ್ಕೆ ಪ್ರಿಯಾಂಕಾ ಸಾಥ್ ನೀಡಿದ್ದಾರೆ.ಉದಯ ಟಿವಿಯಲ್ಲಿ ಹೊಸದಾಗಿ ಆರಂಭವಾಗಲಿರುವ ನಾನು ನನ್ನ ಕನಸು ಧಾರವಾಹಿಯ ಪ್ರಮೋಷನ್ ಗೆ ಪ್ರಿಯಾಂಕಾ ಉಪೇಂದ್ರ ಬಂದಿದ್ದಾರೆ. ಈ ಹಿಂದೆ ನಟಿ ಹರಿಪ್ರಿಯಾ