ಮತ್ತೆ ಭಯಪಡಿಸಲು ಬರ್ತಿದ್ದಾರೆ ಪ್ರಿಯಾಂಕ ಉಪೇಂದ್ರ

ಬೆಂಗಳೂರು| Krishnaveni K| Last Modified ಮಂಗಳವಾರ, 22 ಅಕ್ಟೋಬರ್ 2019 (09:29 IST)
ಬೆಂಗಳೂರು: ಮದುವೆಯಾಗಿ ಎರಡು ಮಕ್ಕಳಾದ ಮೇಲೂ ತಮ್ಮ ಸ್ಟಾರ್ ಡಮ್ ಉಳಿಸಿಕೊಂಡಿದ್ದು ಒಂದಾದ ಮೇಲೊಂದರಂತೆ ಸಿನಿಮಾ ಮಾಡುತ್ತಿದ್ದಾರೆ.

 
ಪ್ರಿಯಾಂಕ ಮತ್ತೆ ಹಾರರ್ ಸಿನಿಮಾವೊಂದನ್ನು ಮಾಡುವ ಸುದ್ದಿ ಬಂದಿದೆ. ಗೌತಮ್ ವಿ ಪಿ ಚೊಚ್ಚಲ ನಿರ್ದೇಶನದ ಹಾರರ್ ಸಿನಿಮಾವೊಂದರಲ್ಲಿ ಪ್ರಿಯಾಂಕ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
 
ಇದೊಂದು ಬಿಗ್ ಬಜೆಟ್ ಸಿನಿಮಾವಾಗಲಿದ್ದು, ತಾಂತ್ರಿಕವಾಗಿಯೂ ರಿಚ್ ಆಗಿ ಮೂಡಿಬರಲಿದೆ ಎನ್ನಲಾಗಿದೆ. ಈಗಾಗಲೇ ಮಮ್ಮಿ ಎಂಬ ಹಾರರ್ ಸಿನಿಮಾ, ದೇವಕಿ ಎನ್ನುವ ಥ್ರಿಲ್ ಸಿನಿಮಾ ಮಾಡಿರುವ ಪ್ರಿಯಾಂಕ ಈಗ ಮತ್ತೊಮ್ಮೆ ಹಾರರ್ ಸಿನಿಮಾ ಮೂಲಕ ಭಯಪಡಿಸಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :