ಬೆಂಗಳೂರು: ಮದುವೆಯಾದ ಬಳಿಕ ಹಲವು ಮಹಿಳಾ ಪ್ರಧಾನ, ಸದಭಿರುಚಿಯ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕ ಉಪೇಂದ್ರ ಈಗ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಜನರ ಎದುರಿಗೆ ಬರಲು ಸಿದ್ಧವಾಗಿದ್ದಾರೆ.ಪ್ರಿಯಾಂಕ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಮಿಸ್ ನಂದಿನಿ’ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.ಈ ಸಿನಿಮಾಗೆ ಗುರುದತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಿಯಾಂಕ ಜೊತೆಗೆ ಅಪರ್ಣಾ, ಕೆ.ಪಿ. ಶ್ರೀಧರ್,