ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರ ಮೂಲಕ ಮನೆಮಾತಾಗಿದ್ದ ಪ್ರಿಯಾಂಕಾ ಉಪೇಂದ್ರ ಮಮ್ಮಿ ಚಿತ್ರದ ಮೂಲಕ ತಮ್ಮ ಇಮೇಜ್ ಬದಲಿಸಿಕೊಂಡಿದ್ದರು. ಮಮ್ಮಿ ಚಿತ್ರದ ಮಹಿಳಾ ಪ್ರಧಾನ ಚಿತ್ರದ ಬಳಿಕ ಅದೇ ರೀತಿಯ ಮತ್ತೊಂದು ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಹೌದು, ಪ್ರಿಯಾಂಕಾ ಉಪೇಂದ್ರ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದರೆ ಐಪಿಎಸ್, ಇನ್ಸ್`ಪೆಕ್ಟರ್ ಪಾತ್ರಗಳಲ್ಲಿ ತಾರೆಯರು ಕಾಣಿಕೊಳ್ಳುತ್ತಾರೆ. ಆದರೆ, ಪ್ರಿಯಾಂಕಾ ವಿಶಿಷ್ಟವಾಗಿ ಪೊಲೀಸ್ ಕಾನ್ಸ್`ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು `ಸೆಕೆಂಡ್ ಹಾಫ್.ಯೋಗಿ