ಪವರ್ ಸ್ಟಾರ್ ಪುನೀತ್ ‘ಫ್ರೆಂಚ್ ಬಿರಿಯಾನಿ’ ಟೇಸ್ಟ್ ಮಾಡಲು ರೆಡಿಯಾಗಿ!

ಬೆಂಗಳೂರು| Krishnaveni K| Last Modified ಗುರುವಾರ, 16 ಜುಲೈ 2020 (09:02 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಲಾಕ್ ಡೌನ್ ವೇಳೆಯಲ್ಲೂ ತಮ್ಮ ಬ್ಯಾನರ್ ನ ಎರಡು ಸಿನಿಮಾಗಳನ್ನು ರಿಲೀಸ್ ಮಾಡಲು ರೆಡಿಯಾಗಿದ್ದಾರೆ.
 > ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ ‘ಫ್ರೆಂಚ್ ಬಿರಿಯಾನಿ’ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಲಿದೆ. ಈ ಸಿನಿಮಾ ಜುಲೈ 24 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಫ್ರೆಂಚ್ ಬಿರಿಯಾನಿ ಪನ್ನಗಾಭರಣ ನಿರ್ದೇಶನದ ಸಿನಿಮಾವಾಗಿದ್ದು, ಡ್ಯಾನಿಶ್ ಸೇಠ್, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ, ಪಿಆರ್ ಕೆ ಪ್ರೊಡಕ್ಷನ್ ನ ಇನ್ನೊಂದು ಸಿನಿಮಾ ‘ಲಾ’ ಕೂಡಾ ತೆರೆಗೆ ಬರಲು ಸಿದ್ಧವಾಗಿದೆ.>


ಇದರಲ್ಲಿ ಇನ್ನಷ್ಟು ಓದಿ :