ಬೆಂಗಳೂರು: ಒಂದೇ ದಿನ ಎರಡು-ಮೂರು ಸಿನಿಮಾಗಳು ರಿಲೀಸ್ ಆಗುತ್ತಿರುವುದು ಚಿತ್ರ ನಿರ್ಮಾಪಕರಿಗೆ ಈಗ ಗಳಿಕೆಯ ಸಂಕಷ್ಟ ಎದುರಾಗಿದೆ.ಒಂದೆಡೆ ಹಲವು ಸಿನಿಮಾಗಳು ರಿಲೀಸ್ ಆಗುವ ಭಯವಾದರೆ ಇನ್ನೊಂದೆಡೆ ಪರಭಾಷೆ ಚಿತ್ರಗಳ ಹಾವಳಿ. ಇದೆಲ್ಲದರಿಂದಾಗಿ ಚಿತ್ರಮಂದಿರಗಳ ಕೊರತೆಯೂ ಆಗುತ್ತಿದೆ. ಇದು ಚಿತ್ರನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ.ಹೀಗಾಗಿ ಇತ್ತೀಚೆಗೆ ಕೆಲವು ಸಿನಿಮಾಗಳ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ. ಅವತಾರ ಪುರುಷ, ಒಂಭತ್ತನೇ ದಿಕ್ಕು, ಚಾರ್ಲಿ 777 ಇದಕ್ಕೆ ಉದಾಹರಣೆಗಳು. ಲಾಕ್ ಡೌನ್ ಬಳಿಕ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ