ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಇಂದಿಗೂ ಜನ ಅವರ ಅಗಲುವಿಕೆಯ ನೋವಿನಲ್ಲೇ ಇದ್ದಾರೆ.ಈ ನಡುವೆ ಜಿಕೆಜಿಎಸ್ ಟ್ರಸ್ಟ್ ಮತ್ತು ವರುಣ್ ಸ್ಟುಡಿಯೋಸ್ ಪುನೀತ್ ಗೌರವಾರ್ಥ ‘ಅಪ್ಪು ನಮನ’ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಪುನೀತ್ ಕುಟುಂಬಸ್ಥರು, ಕ್ರೇಜಿಸ್ಟಾರ್ ರವಿಚಂದ್ರನ್, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು ಭಾಗಿಯಾಗಿದ್ದರು.ಆಂಕರ್ ಅನುಶ್ರೀ ಕಾರ್ಯಕ್ರಮ ನಿರೂಪಿಸಿದ್ದಾರೆ.