ಬೆಂಗಳೂರು: ಕಾಟೇರ ಸಕ್ಸಸ್ ಬಳಿಕ ಬೆಂಗಳೂರಿನ ಪಬ್ ಒಂದರಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ ಆರೋಪಕ್ಕೊಳಗಾದ ಸೆಲೆಬ್ರಿಟಿಗಳು ನಿನ್ನೆ ಪೊಲೀಸ್ ವಿಚಾರಣೆಗೆ ಹಾಜರಾದರು. ಆದರೆ ಪೊಲೀಸರ ಮುಂದೆ ದರ್ಶನ್ ಮತ್ತು ಇತರರು ನೀಡಿದ ಹೇಳಿಕೆಗೂ ಪೊಲೀಸರ ಆರೋಪಗಳಿಗೂ ಹೊಂದಿಕೆಯೇ ಆಗುತ್ತಿಲ್ಲ. ಹೀಗಾಗಿ ದರ್ಶನ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪಬ್ ನಲ್ಲಿ ಮದ್ಯ ಸರಬರಾಜು ನಡೆಯುತ್ತಿತ್ತು. ರಾತ್ರಿಯಿಡೀ ಪಾರ್ಟಿ ಮಾಡಲಾಗುತ್ತಿತ್ತು. ಪೊಲೀಸರು ಬಂದು ಎಚ್ಚರಿಕೆ ನೀಡಿದ್ದರು ಎಂದೆಲ್ಲಾ ವರದಿಯಲ್ಲಿ ಉಲ್ಲೇಖಿಸಿದ್ದರು.