ಆಕ್ಟ್ 1978 ಸಿನಿಮಾ ನೋಡಿದ ಪ್ರೇಕ್ಷಕರು ಏನಂತಾರೆ?

ಬೆಂಗಳೂರು| Krishnaveni K| Last Modified ಶನಿವಾರ, 21 ನವೆಂಬರ್ 2020 (09:49 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾ ಆಕ್ಟ್ 1978. ಈ ಸಿನಿಮಾ ಪ್ರೇಕ್ಷಕರನ್ನು ಮತ್ತೆ ಥಿಯೇಟರ್ ಕಡೆಗೆ ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರರಂಗದ ಮಂದಿಗೆ ಮೂಡಿದೆ. ಅಷ್ಟರಮಟ್ಟಿಗೆ ಇದೊಂದು ಅತ್ಯುತ್ತಮ ಪ್ರಯತ್ನ.

 
ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಹೆಣ್ಣಿನ ಕತೆ. ಇದು ಪ್ರತಿಯೊಬ್ಬರಿಗೂ ನನ್ನದೇ ಕತೆ ಎನಿಸಬಹುದು. ಈಗಾಗಲೇ ನಾತಿಚರಾಮಿಯಂತಹ ಅದ್ಭುತ ಕತೆಯಿರುವ ಸಿನಿಮಾ ಮಾಡಿರುವ ನಿರ್ದೇಶಕ ಮಂಸೋರೆಯವರ ಮತ್ತೊಂದು ಮಾಸ್ಟರ್ ಪೀಸ್ ಇದು. ಹಿಂದೆ ಸುನಿಲ್ ಕುಮಾರ್ ದೇಸಾಯಿಯವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ನಿಷ್ಕರ್ಷ’ ಸಿನಿಮಾವನ್ನು ನೆನಪಿಸುತ್ತಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
 
ಯಜ್ಞಾ ಶೆಟ್ಟಿಯಾಗಲೀ ಇತರ ಕಲಾವಿದರಾಗಲೀ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯವೊದಗಿಸಿದ್ದಾರೆ. ಆದರೆ ಫ್ಲ್ಯಾಶ್ ಬ್ಯಾಕ್ ನಲ್ಲಿ ಬರುವ ಕತೆ ಅಷ್ಟೊಂದು ಪ್ರಭಾವೀ ಅಲ್ಲದೇ ಇದ್ದರೂ ಬಹಳ ದಿನಗಳ ನಂತರ ಥಿಯೇಟರ್ ನಲ್ಲಿ ಕೂತುಕೊಂಡು ನೋಡಬಹುದಾದ ಒಂದು ಒಳ್ಳೆಯ ಸಿನಿಮಾ ಎಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :