ನಟ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಭಾನುವಾರ (ಅ.31) ಮುಂಜಾನೆ 7.30ಕ್ಕೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ರಾಜ್ಕುಮಾರ್ ಕುಟುಂಬದವರು ಈಡೀಗ ಸಂಪ್ರದಾಯದಂತೆ ಕಾರ್ಯ ನೆರವೇರಿಸಿದ್ದಾರೆ. ಪುನೀತ್ಗೆ ಗಂಡು ಮಕ್ಕಳು ಇಲ್ಲದ ಕಾರಣ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಅವರಿಂದ ಅಂತಿಮ ವಿಧಿವಿಧಾನ ಮಾಡಿಸಲಾಗಿದೆ. ತಂದೆ ಡಾ. ರಾಜ್ಕುಮಾರ್, ತಾಯಿ ಪಾರ್ವತಮ್ಮ ಸಮಾಧಿಯ ಪಕ್ಕದಲ್ಲೇ ಪುನೀತ್ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಗಿದೆ. ಅಂತ್ಯಕ್ರಿಯೆ ವೇಳೆ