ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರ ಕಷ್ಟಕ್ಕೆ ಕಿಚ್ಚ ಸುದೀಪ್ ಸ್ಪಂದಿಸಿದ ಸುದ್ದಿಯನ್ನು ಇತ್ತೀಚೆಗೆ ಓದಿರುತ್ತೀರಿ. ಇದೀಗ ಅದೇ ಅಭಿಮಾನಿ ಸುದೀಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ.ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಬೆನಕ ಎಂಬವರ ತಾಯಿಗೆ ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆಗೆ ಹಣ ಬೇಕಾಗಿತ್ತು. ಸಾಮಾನ್ಯವಾಗಿ ಕಷ್ಟ ಬಂದರೆ ಅಪ್ಪು ಬಳಿ ನೆರವು ಕೇಳುತ್ತಿದ್ದ ಬೆನಕಗೆ ಈ ಬಾರಿ ತಮ್ಮ ಮೆಚ್ಚಿನ ನಟನೇ ಇಲ್ಲದಿರುವುದರಿಂದ ದಿಕ್ಕು ತೋಚದೇ ಸುದೀಪ್