ಬೆಂಗಳೂರು: ಯುವರತ್ನ ಸಿನಿಮಾವನ್ನು ಇಷ್ಟು ಬೇಗ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಲು ಹೊರಟಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ವಿರುದ್ಧ ಪುನೀತ್ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಎಂದರೆ ‘ಕೆಜಿಎಫ್ 2’. ಈ ಸಿನಿಮಾವನ್ನು ಜುಲೈ 16 ರಂದು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ.ಹಾಗಿದ್ದರೆ ಕೆಜಿಎಫ್ 2 ಸಿನಿಮಾವನ್ನೂ ನೇರವಾಗಿ ಒಟಿಟಿ ಫಾರ್ಮ್ಯಾಟ್ ಮೂಲಕವೇ ಬಿಡುಗಡೆ