ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಮುನ್ನ ಶೂಟಿಂಗ್ ಮಾಡಿದ್ದ ಡಾಕ್ಯುಮೆಂಟರಿಯ ಟೀಸರ್ ಡಿಸೆಂಬರ್ 6 ಕ್ಕೆ ಲಾಂಚ್ ಆಗಲಿದೆ.ಈ ಡಾಕ್ಯುಮೆಂಟರಿ ಅವರ ಕನಸಿನ ಕೂಸಾಗಿತ್ತು. ಇದರ ಬಗ್ಗೆ ತಮ್ಮ ಆಪ್ತರಲ್ಲಿ ಅವರು ಹೇಳಿಕೊಂಡಿದ್ದರು. ಒಂದು ವೇಳೆ ಅಕ್ಟೋಬರ್ 29 ಕ್ಕೆ ಅಂತಹದ್ದೊಂದು ದುರಂತವಾಗದೇ ಇದ್ದಿದ್ದರೆ ನವಂಬರ್ 1 ರಂದು ರಾಜ್ಯೋತ್ಸವ ದಿನವೇ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆಯಾಗಬೇಕಿತ್ತು.ಆದರೆ ಪುನೀತ್ ನಿಧನದಿಂದಾಗಿ ಟೀಸರ್ ಲಾಂಚ್ ಮುಂದೂಡಿಕೆಯಾಯ್ತು. ಇದೀಗ ಪಿಆರ್