ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನ ಡಾಕ್ಯುಮೆಂಟರಿ ‘ಗಂಧದ ಗುಡಿ’ ಟೀಸರ್ ಇಂದು ಬೆಳಿಗ್ಗೆ ರಿಲೀಸ್ ಆಗಿದೆ.ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಅದ್ಭುತ ರೆಸ್ಪಾನ್ಸ್ ಪಡೆದಿದೆ. ಇದನ್ನು ನೋಡಿದವರು ಯಾರೂ ಕೇವಲ ಡಾಕ್ಯುಮೆಂಟರಿ ಎನ್ನಲು ಸಾಧ್ಯವಿಲ್ಲ. ಮೇಕಿಂಗ್ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದಂತೆ ಅದ್ಭುತವಾಗಿ ಚಿತ್ರೀಕರಿಸಲಾಗಿದೆ ಎನ್ನುವುದು ಟೀಸರ್ ನಲ್ಲೇ ಸ್ಪಷ್ಟವಾಗುತ್ತದೆ.ಸ್ವತಃ ಪುನೀತ್ ರಾಜ್ ಕುಮಾರ್ ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡಿರುವುದು, ಕರ್ನಾಟಕದ ವನ ಸಂಪತ್ತಿನ ದೃಶ್ಯ ವೈಭವ ವೀಕ್ಷಕರನ್ನು