ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಬಹದ್ದೂರ್ ಚೇತನ್ ನಿರ್ದೇಶನದ ‘ಜೇಮ್ಸ್’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.ಕಾಶ್ಮೀರದಲ್ಲಿ ಇತ್ತೀಚೆಗೆ ಮಹತ್ವದ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿ ಬಂದಿರುವ ಚಿತ್ರತಂಡ ಈ ವರ್ಷ ದಸರಾ ಹಬ್ಬದ ವೇಳೆಗೆ ಥಿಯೇಟರ್ ಗೆ ಬರುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಕೊರೋನಾ ಸಂಕಷ್ಟ ಮುಗಿದು ಎಲ್ಲಾ ಸರಿ ಹೋದರೆ ಈ ದಸರಾಗೆ ಸಿನಿಮಾ ರಿಲೀಸ್ ಆಗಬಹುದು.ಇತ್ತೀಚೆಗಷ್ಟೇ ಯುವರತ್ನ ಸಿನಿಮಾ ರಿಲೀಸ್ ಆದ ಖುಷಿಯಲ್ಲಿರುವ