Photo Courtesy: Twitterಬೆಂಗಳೂರು: ಕರುನಾಡಿನ ಪ್ರೀತಿಯ ಅಪ್ಪು ಇಂದಿಗೆ ಅಧಿಕೃತವಾಗಿ ಕರ್ನಾಟಕ ರತ್ನನಾಗಿದ್ದಾರೆ. ಇಂದು ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇಡೀ ಕಾರ್ಯಕ್ರಮ ಮಳೆಯಿಂದಾಗಿ ಅದ್ವಾನವಾಯಿತು ಎನ್ನುವುದು ಖೇದಕರ. ಕಾರ್ಯಕ್ರಮ ಸಂಜೆ 4 ಗಂಟೆ ಸುಮಾರಿಗೆ ಆರಂಭವಾಗಿದ್ದು, ಆಗಿನಿಂದ ಬಿಡದೇ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಕ್ ಹಿಡಿದು ನಿರೂಪಣೆಯ ಕೆಲಸವನ್ನೂ ಮಾಡಿದರು. ವೇದಿಕೆಯಲ್ಲಿದ್ದ ಗಣ್ಯರಿಗೆ