WDಬೆಂಗಳೂರು: ದಿನಗಳು ಎಷ್ಟು ಬೇಗನೇ ಸರಿದುಹೋಗುತ್ತವೆ. ನಿನ್ನೆ ಮೊನ್ನೆಯಷ್ಟೇ ನಮ್ಮ ಜೊತೆಗಿದ್ದ ಅಪ್ಪು ನಮ್ಮನ್ನಗಲಿ ಇಂದಿಗೆ ಒಂದು ವರ್ಷವೇ ಕಳೆದುಹೋಗಿದೆ.ಕಳೆದ ವರ್ಷ ಇದೇ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಅಷ್ಟೊಂದು ಫಿಟ್ ಆಗಿದ್ದ ಅಪ್ಪು ಇದ್ದಕ್ಕಿದ್ದಂತೆ ನಮ್ಮನ್ನಗಲಿದ್ದು, ಇಡೀ ಕರುನಾಡನ್ನು ದುಃಖದ ಮಡಿಲಲ್ಲಿ ಮುಳುಗಿಸಿತ್ತು.ಎರಡು ದಿನದ ಬಳಿಕ ಪುನೀತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ಬಂದು ಪುನೀತ್ ಅಂತಿಮ ದರ್ಶನ