ಬೆಂಗಳೂರು: ಇತ್ತೀಚೆಗೆ ಸರ್ಕಾರಿ ಪ್ರಾಯೋಜಿತ ಸಾಕ್ಷ್ಯ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರೀಕರಣದ ನಡುವೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪುನೀತ್ ಜನರ ಮಧ್ಯೆ ಸುಲಭವಾಗಿ ಬೆರೆಯುತ್ತಾರೆ. ಅದರಲ್ಲೂ ಊಟದ ವಿಚಾರಕ್ಕೆ ಬಂದರೆ ಯಾವುದೇ ಹಮ್ಮು ಬಿಮ್ಮು ತೋರಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ.ಸಾಕ್ಷ್ಯ ಚಿತ್ರದ ಚಿತ್ರೀಕರಣದ ವೇಳೆ ಪುನೀತ್ ಗುಡ್ಡ ಗಾಡಿನಲ್ಲಿ ಮಣ್ಣಿನ ನೆಲದ ಮೇಲೆ ಇತರರೊಂದಿಗೆ ಕೂತು ಊಟ ಮಾಡುತ್ತಿರುವ