ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೊಲೀಸ್ ಇಲಾಖೆ ಸಹಯೋಗದಲ್ಲಿ ಡ್ರಗ್ಸ್ ಮುಕ್ತ ಸಮಾಜ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿರುವ ಪುನೀತ್ ರಾಜ್ ಕುಮಾರ್, ಎಲ್ಲರೂ ಡ್ರಗ್ಸ್ ಗೆ ನೋ ಹೇಳಿ. ಮಾದಕ ವಸ್ತುಗಳು ನಮ್ಮ ಸಮಾಜಕ್ಕೆ ದೊಡ್ಡ ಕಂಟಕ. ಇದಕ್ಕೆ ಯಾರು ಬೇಕಾದರೂ ಬಲಿಯಾಗಬಹುದು. ಬಲಿಯಾಗದೇ ಇರಬೇಕಾದರೆ ನಾವೆಲ್ಲಾ ಪೊಲೀಸರ ಜೊತೆ ಕೈ ಜೋಡಿಸಬೇಕು. ಮಾದಕ ವಸ್ತುಗಳಿಗೆ ನೋ ಹೇಳೋಣ. ಜೀವನ ತುಂಬಾ ಅಮೂಲ್ಯವಾದುದು