ಬೆಂಗಳೂರು: ರುಸ್ತುಂ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಶಿವಣ್ಣ ಲುಕ್ ಗೆ ಮೆಚ್ಚುಗೆ ಸಿಕ್ಕಿದೆ.ಇನ್ನೊಂದೆಡೆ ಶಿವಣ್ಣ ಸಿನಿಮಾದ ಟ್ರೈಲರ್ ಗೆ ಸಹೋದರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ತುಂಬಾ ಚೆನ್ನಾಗಿ ಕಾಣ್ತಿದ್ದಾರೆ. ರವಿವರ್ಮ ಮಾಸ್ಟರ್, ಶಿವಣ್ಣ, ಮತ್ತು ಇಡೀ ರುಸ್ತುಂ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಪುನೀತ್ ಶುಭ ಹಾರೈಸಿದ್ದಾರೆ.ಇನ್ನು, ಟ್ರೈಲರ್ ನೋಡಿದ ವೀಕ್ಷಕರೂ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.