ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾ ಇನ್ನೇನು ಕೊನೆಯ ಹಂತದಲ್ಲಿದ್ದು, ಅದಾದ ಬಳಿಕ ಜೇಮ್ಸ್ ಸಿನಿಮಾ ಮಾಡಲಿದ್ದಾರೆ. ಇದರ ಬಳಿಕ ಪುನೀತ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪವರ್ ಸ್ಟಾರ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.ಅದೂ ರಾಮ ರಾಮ ರೇ ಎಂಬ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ಡಿ ಸತ್ಯಪ್ರಕಾಶ್ ನಿರ್ದೇಶನದಲ್ಲಿ ಎನ್ನಲಾಗಿದೆ. ಈ ಸಿನಿಮಾಗೆ ಇನ್ನೂ ಕೆಲಸಗಳು ನಡೆಯುತ್ತಿದೆಯಷ್ಟೇ.