ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಶೀರ್ಷಿಕೆ ಫೈನಲ್ ಆಗಿದೆ. ತಮ್ಮ ಮುಂದಿನ ಚಿತ್ರಕ್ಕೆ ಅಂಜನಿಪುತ್ರ ಎಂದು ಹೆಸರಿಡಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ. ಅಂದಹಾಗೆ ಇದು ತಮಿಳಿನ ಯಶಸ್ವಿ ಚಿತ್ರ ಪೂಜೈ ರೀಮೇಕ್. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ನಿರ್ದೇಶಕರಾಗಿ ಬದಲಾಗಿರುವ ನೃತ್ಯ ನಿರ್ದೇಶಕ ಎ ಹರ್ಷ. ಚಿತ್ರಕ್ಕೆ ಎಂ.ಎನ್ ಕುಮಾರ್ ಮತ್ತು ಅದ್ದೂರಿ ಚಿತ್ರಗಳ ನಿರ್ಮಾಪಕಿ ಎಂದೇ ಕರೆಸಿಕೊಂಡಿರುವ